Participated with Honorable Chief Minister of Karnataka Shri Siddaramaiah, ministers and dignitaries in the Mutt organized by Sri Narayana Dharmasanghama Trust at Shivagiri Mutt, Kerala., 31/12/2025

ಕೇರಳ ರಾಜ್ಯದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಧರ್ಮಸಂಘಮ ಟ್ರಸ್ಟ್ ಆಯೋಜಿಸಿದ್ದ ಮಠದ ಯಾತ್ರಾರ್ತಿಗಳ ಸಮಾವೇಶದಲ್ಲಿ, ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು, ಸಚಿವರು ಮತ್ತು ಗಣ್ಯರೊಂದಿಗೆ ಭಾಗವಹಿಸಿದೆ.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಶ್ರೀ ಗುರುಗಳಿಗೆ ನಮಿಸಲಾಯಿತು.

Inspection, land pooja and inauguration of various development works were conducted at Peraje village of Madikeri taluk of Virajpet assembly constituency, 30/12/2025

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯ ವೀಕ್ಷಣೆ, ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರೆವೆರಿಸಲಾಯಿತು.


We respectfully remember national poet Kuvempu on his birthday, 29/12/2025

ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇವೆ.


Happy 141st Indian National Congress Foundation Day., 28/12/2025

141 ನೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ದಿನದ ಶುಭಾಶಯಗಳು.


Visited Aremeri SMS Vidyapeeta School in Virajpet Taluk and participated in the Vasudaiva Kutumbakam School Anniversary and farewell ceremony of students and wished them for bright future., 27/12/2025

ವಿರಾಜಪೇಟೆ ತಾಲೂಕಿನ ಅರೇಮೇರಿ ಎಸ್ಎಂಎಸ್ ವಿದ್ಯಾಪೀಠ ಶಾಲೆಗೆ ಭೇಟಿ ನೀಡಿ ಇಲ್ಲಿ ನಡೆಯುತ್ತಿರುವ ವಸುದೈವ ಕುಟುಂಬಕಂ ಶಾಲಾ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭ ಕೋರಲಾಯಿತು.