C. Vamshi Krishna, the Joint Commissioner of Police for Bengaluru West Division, paid a visit to the Vidhana Soudha office., 17/06/2025

ಬೆಂಗಳೂರು ನಗರ ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತರಾದ ಸಿ. ವಂಶಿ ಕೃಷ್ಣರವರು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿದರು.
 
img
 

Tribute to Pandit Jawaharlal Nehru: Architect of Socialist, Secular, and Democratic India, 27/05/2025

ಸ್ವಾತಂತ್ರ್ಯ ಹೋರಾಟಗಾರರಾಗಿ, ದೇಶದ ಮೊದಲ ಪ್ರಧಾನಿಯಾಗಿ ಭಾರತವನ್ನು ಸಮಾಜವಾದಿ, ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರವಾಗಿ ಕಟ್ಟಿಬೆಳೆಸುವಲ್ಲಿ ಪಂಡಿತ್‌ ಜವಾಹರಲಾಲ್‌ ನೆಹರು ಅವರ ಕೊಡುಗೆ ಅನನ್ಯ, ಅದ್ವಿತೀಯ. ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆಯ ಈ ದಿನ ಅವರ ಜೀವನಾದರ್ಶಗಳನ್ನು ನೆನೆದು ಗೌರವ ನಮನ ಸಲ್ಲಿಸೋಣ.
 
img
 

Paid final respects to the mother of Karnataka State Urban Development Minister Shri Byrathi Suresh and offered condolences to the minister and his family, 24/05/2025

ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಸಚಿವರಾದ ಶ್ರೀ ಬೈರತಿ ಸುರೇಶ್ ರವರ ತಾಯಿಯ ಆಂತಿಮ ದರ್ಶನ ಪಡೆದು ಸಚಿವರಿಗೆ ಮತ್ತು ಆವರ ಕುಟುಂಬಕ್ಕೆ ಸಾಂತ್ವನ ಹೇಳಿದೆ.
 
img
 

On the occasion of the unveiling of the logo for Thok Namme 2025, a gun shooting competition among Kodava families organized by Pemmanda Vakk Thuchmakeri, 23/05/2025

ಜೂನ್ 7 ಹಾಗೂ 8 ರಂದು, ಜೂನಿಯರ್ ಕಾಲೇಜ್ ಮೈದಾನ ಪೊನ್ನಂಪೇಟೆಯಲ್ಲಿ, ಪೆಮ್ಮಂಡ ವಕ್ಕ ತೂಚಮಕೇರಿ ಇವರ ವತಿಯಿಂದ ಆಯೋಜಿಸಿರುವ ಕೊಡವ ಕುಟುಂಬಗಳ ನಡುವಿನ *ತೋಕ್ ನಮ್ಮೆ 2025* ಗುಂಡು ಹೊಡೆಯುವ ಸ್ಪರ್ಧೆಯ ಲಾಂಛನವನ್ನು ಇಂದು ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಅನಾವರಣ ಮಾಡಿದ ಸಂದರ್ಭ.
 
img
 

TV 1 NEWS UPDATE, 23/05/2025

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರ ಭೇಟಿ
-------------------

ವಿರಾಜಪೇಟೆ
ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿ ಕುಟ್ಟಿರ.ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ ಇಂದು ಕೊಡಗಿನ ಕಾಂಗ್ರೆಸ್ ನಾಯಕರುಗಳ ನಿಯೋಗವು ಹಲವು ಬೇಡಿಕೆಗಳೊಂದಿಗೆ ಮುಜುರಾಯಿ ಹಾಗೂ ಸಾರಿಗೆ ಸಚಿವರಾದ ಸನ್ಮಾನ್ಯ ರಾಮಲಿಂಗ ರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಪ್ರಮುಖವಾಗಿ ಕೊಡಗಿನ ದೇವಸ್ಥಾನಗಳ ಅಭಿವೃದ್ಧಿಗೆ ಹಾಗು ಗ್ರಾಮೀಣ ಪ್ರದೇಶಗಳಿಗೆ ಹೊಸ ಬಸ್ ಮಾರ್ಗಗಳನ್ನು ನೀಡುವ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಲಾಯಿತು. ಇದಕ್ಕೆ ಮಾನ್ಯ ಸಚಿವರು ಪೂರಕವಾಗಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಾನಂಡ ಪ್ರತ್ಯು, ದೇವಸ್ಥಾನದ ಅಧ್ಯಕ್ಷರಾದ ಅದೇಂಗಡ ವಾಸು ಬೆಳ್ಳಿಯಪ್ಪ, ಬಾಳೆಲೆ ಗ್ರಾಮ ಪಂಚಾಯಿತಿ ಸದಸ್ಯ ಅದೇಂಗಡ ವಿನು ಉತ್ತಪ್ಪ ಉಪಸ್ಥಿತರಿದ್ದರು.
 
img