Mysore Kodava Society Felicitates Ponnanna at Vidhana Soudha, 24/09/2026

ಮೈಸೂರು ಕೊಡವ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರುಗಳ ನೇತೃತ್ವದ ತಂಡವು, ಇಂದು ವಿಧಾನಸೌಧದಲ್ಲಿ ನನ್ನನ್ನು ಭೇಟಿಯಾಗಿ, ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನನಗೆ ಶುಭಾಶಯಗಳು ಕೋರುತ್ತಾ ಸನ್ಮಾನಿಸಿದ ಸಂದರ್ಭ.

 


Happy Citizen Labor Day: Salute to Sanitation Workers, 24/09/2026

ಪೌರ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು
ಸ್ವಚ್ಚತಾ ಕಾರ್ಯದಲ್ಲಿ ತೊಡಗಿ ಎಲ್ಲರ ಆರೋಗ್ಯ ರಕ್ಷಣೆ ಮಾಡುತ್ತಿರುವ ಎಲ್ಲಾ ಪೌರ ಕಾರ್ಮಿಕರೂ ಅಭಿನಂದನೀಯರು.
 

CM DK Shivakumar Rejects Kasturirangan Report Amid MLA Demand, 23/09/2026

ಕಸ್ತೂರಿರಂಗನ್ ವರದಿಯ ಕುರಿತು ಚರ್ಚಿಸಲು ಕರೆದ ವಿಶೇಷ ಅಧಿವೇಶನದ ಬಗ್ಗೆ ಮಾನ್ಯ ಶಾಸಕರು ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರುಗಳೊಂದಿಗೆ ಮಾತನಾಡುತ್ತಾ, ನಮ್ಮ ಸರ್ಕಾರ ಸದಾ ಜನರ ಹಿತವನ್ನು ಕಾಯುವುದರಲ್ಲಿ ಯಾವುದೇ ರಾಜಿ ಮಾಡುವುದಿಲ್ಲ ಎಂದು ತಿಳಿಸಿ ಕಸ್ತೂರಿರಂಗನ್ ವರದಿಯನ್ನು ನಮ್ಮ ಶಾಸಕರ ಒತ್ತಾಯದ ಮೇಲೆ ತಿರಸ್ಕರಿಸುತ್ತಿರುವುದಾಗಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ರವರು ತಿಳಿಸಿದ ಸಂದರ್ಭ.

 


Intense Assembly Discussion on Kasturirangan Report and Farmers’ Issues with CM D.K. Shivakumar, 21/09/2026

ಕರ್ನಾಟಕ ವಿಧಾನಸಭೆಯಲ್ಲಿ ಕಸ್ತೂರಿರಂಗನ್ ಹಾಗೂ ರೈತರ ಸಮಸ್ಯೆಗಳ ಕುರಿತು ನಡೆಯುತ್ತಿರುವ ಮೂರು ದಿನಗಳ ವಿಶೇಷ ಅಧಿವೇಶನದ ಸಂದರ್ಭ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ DK Shivakumar ಅವರೊಂದಿಗೆ ಗಹನವಾದ ಚರ್ಚೆಯಲ್ಲಿ ತೊಡಗಿರುವ ಸಂದರ್ಭ.

 


Kasturirangan Report’s Impact on Malnad Farmers Raised in Sakleshpur, 20/09/2026

ಸಕಲೇಶಪುರ ನಗರದಲ್ಲಿ ಇಂದು ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಮಲೆನಾಡು ಭಾಗದ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರಿಗೆ ಎದುರಾಗಬಹುದಾದ ಅನಾನುಕೂಲಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ DK Shivakumar ಅವರ ಗಮನಕ್ಕೆ ತರಲಾಯಿತು.