Kanchan Ponnanna Joins Birthday Visit to Heggala Old Age Home, 11/07/2026
ವಿರಾಜಪೇಟೆಯ ಹೆಗ್ಗಳ ಗ್ರಾಮದಲ್ಲಿರುವ ವೃದ್ಧಾಶ್ರಮಗಳಿಗೆ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರೊಂದಿಗೆ ಭೇಟಿ ನೀಡಿ ನಿವಾಸಿಗಳೊಂದಿಗೆ ಮಾತನಾಡಿದೆ. ಈ ಸಂದರ್ಭದಲ್ಲಿ ನನ್ನ ಜನ್ಮದಿನ ಪ್ರಯುಕ್ತ ಅವರುಗಳ ಹಾರೈಕೆ ಹಾಗೂ ಆಶೀರ್ವಾದ ಪಡೆದೆ.

New Gonikoppa Bus Stand Inaugurated, 11/07/2026
ಪೊನ್ನಂಪೇಟೆ ತಾಲೂಕು ಗೋಣಿಕೊಪ್ಪ ಭಾಗದಲ್ಲಿ ನಿರ್ಮಾಣಗೊಂಡಿರುವ ನೂತನ ಬಸ್ ನಿಲ್ದಾಣವನ್ನು ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ಹಾಗೂ ನನ್ನ ಸಹೋದರರಾದ ಶ್ರೀ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ಅವರೊಂದಿಗೆ ಉದ್ಘಾಟನೆ ನೇರೆವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಡೆಪಂಡ ಸುಜಾ ಕುಶಾಲಪ್ಪ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ಮಿದೇರಿರ ನವೀನ್, ಗೋಣಿಕೊಪ್ಪ ಪಂಚಾಯತ್ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Development Works Inaugurated, Birthday Celebrated with Kundacherry Leaders, 10/07/2026
ಭಾಗಮಂಡಲ ಹಾಗೂ ಕುಂದಚೇರಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಬಳಿಕ ಕುಂದಚೇರಿ ಪ್ರಮುಖರ ಜೊತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಂದರ್ಭ.

Kanchan Ponnanna Joins 52nd Birthday Celebration with Schoolchildren, 10/07/2026
52ನೇ ಹುಟ್ಟುಹಬ್ಬವನ್ನು ಭಾಗಮಂಡಲ ಹೋಬಳಿಯ ವಾಜಪೇಯಿ ವಸತಿ ಶಾಲಾ ಮಕ್ಕಳೊಂದಿಗೆ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ಅವರೊಂದಿಗೆ ಭಾಗವಹಿಸಿ ಆಚರಿಸಿದ ಸಂದರ್ಭ...

Kanchan Ponnanna Seeks Divine Blessings for Constituency's Progress, 10/07/2026
ನನ್ನ ಜನ್ಮದಿನದಂದು ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ಅವರೊಂದಿಗೆ ತಾಯಿ ಕಾವೇರಮ್ಮ ಹಾಗೂ ಭಗಂಡೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಆಶೀರ್ವಾದ ಕೋರಿದ ಸಂದರ್ಭ.
