Ponnanna Raises Farmers’ Concerns Over Kasturirangan Report, 29/09/2026

ಕಸ್ತೂರಿರಂಗನ್ ವರದಿಯಿಂದಾಗಿ ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆ ನಾನು ಧ್ವನಿ ಎತ್ತಿದ್ದೇನೆ. ಪರಿಸರವಾದಿಗಳು ಅವರ ಕೆಲಸವನ್ನು ಮಾಡಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆ ನಾನು ಸಂಪೂರ್ಣವಾಗಿ ಅಧ್ಯಯನ ಮಾಡಿ ಮಾತನಾಡಿದ್ದೇನೆ.

 


A.K. Subbaiah–Ponnamma Subbaiah Trust Supports Students with Scholarships, 29/09/2026

ಪ್ರತಿಯೊಂದು ಮಗುವಿನ ಕನಸುಗಳಿಗೆ ರೆಕ್ಕೆ ನೀಡುವ ಶಕ್ತಿ ಶಿಕ್ಷಣಕ್ಕಿದೆ. ಆರ್ಥಿಕ ಅಡೆತಡೆಗಳು ಯಾವುದೇ ವಿದ್ಯಾರ್ಥಿಯ ಭವಿಷ್ಯದ ಬೆಳಕನ್ನು ಮಸುಕುಗೊಳಿಸಬಾರದು.
ದಿವಂಗತ ಎ.ಕೆ ಸುಬ್ಬಯ್ಯ-ಪೊನ್ನಮ್ಮ ಸುಬ್ಬಯ್ಯ ರವರ ದತ್ತಿನಿಧಿ (ಚಾರಿಟೇಬಲ್ ಟ್ರಸ್ಟ್) ವತಿಯಿಂದ ಪದವಿ ಶಿಕ್ಷಣಕ್ಕೆ ವಿದ್ಯಾರ್ಥಿವೇತನಗಳನ್ನು ನೀಡುವ ಮೂಲಕ ಅವರ ಶೈಕ್ಷಣಿಕ ಪಯಣಕ್ಕೆ ಬಲವಾದ ಬೆಂಬಲ ನೀಡುತ್ತಿದ್ದೇವೆ
ಶಿಕ್ಷಣವು ಕೇವಲ ಒಂದು ಹಕ್ಕು ಮಾತ್ರವಲ್ಲ; ಅದು ಉತ್ತಮ ಜೀವನದತ್ತ ದಾರಿ ತೋರಿಸುವ ಅಮೂಲ್ಯ ಕೀಲಿಕೈ. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಏಕೆಂದರೆ ಇಂದಿನ ವಿದ್ಯಾರ್ಥಿಗಳೇ ನಾಳೆಯ ಭಾರತದ ನಿರ್ಮಾತೃಗಳು. ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶಗಳನ್ನು ಒದಗಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ.
ಅವರ ಶೈಕ್ಷಣಿಕ ಪಯಣಕ್ಕೆ ಬಲವಾದ ಬೆಂಬಲ ನಮ್ಮ ಟ್ರಸ್ಟ್ ನೀಡುತ್ತಿದೆ.
ಬನ್ನಿ, ಅವರ ಕನಸುಗಳಿಗೆ ಬೆಂಬಲವಾಗಿ ನಿಲ್ಲೋಣ, "ಶಿಕ್ಷಣದ ಬೆಳಕನ್ನು ಹರಡೋಣ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಕೈಜೋಡಿಸೋಣ.”
ಇಂದಿನ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ, ನನ್ನ ದೊಡ್ಡಮ್ಮನವರಾದ ಗಂಗಮ್ಮ, ಶಕ್ತಿ ದಿನ ಪತ್ರಿಕೆಯ ಸಂಪಾದಕರಾದ ಜಿ. ಚಿದ್ವಿಲಾಸ್, ಗೀತಾ ಚಂಗಪ್ಪ ಉಪಸ್ಥಿತರಿದ್ದರು.
 

Participated in Virajpet Sri Ganeshotsava Shobha Yatra, 29/09/2026

ವಿರಾಜಪೇಟೆಯಲ್ಲಿ ಹಲವು ದಿನಗಳಿಂದ ಭಕ್ತಿ-ಭಾವ, ಶ್ರದ್ಧೆಯೊಂದಿಗೆ ಆಚರಿಸಲ್ಪಟ್ಟು ಸಂಪನ್ನಗೊಂಡ ಅದ್ದೂರಿ ಶ್ರೀ ಗಣೇಶೋತ್ಸವದ ವಿವಿಧ ಸಮಿತಿಗಳ ಶೋಭಾಯಾತ್ರೆಯಲ್ಲಿ ಭಾಗವಹಿಸಿ, ಶ್ರೀ ದೇವರಿಗೆ ಪೂಜೆ ಸಲ್ಲಿಸಿದ ಸಂದರ್ಭ

 


Happy WorldTourism Day, 29/09/2026

ವಿಶ್ವ ಪ್ರವಾಸೋದ್ಯಮ ದಿನ
ದಿನದ ಶುಭಾಶಯಗಳು
 

Srimangala–Nalkeri Road Development Works to Begin Soon, 29/09/2026

ಪೊನ್ನಂಪೇಟೆ ತಾಲೂಕು ಶ್ರೀಮಂಗಲ-ನಾಲ್ಕೇರಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡುತ್ತಾ ಪ್ರತಿದಿನ ನೂರಾರು ಜನರು ಹಾಗೂ ವಾಹನಗಳು ಸಂಚರಿಸುವ ಈ ಭಾಗದ ರಸ್ತೆಯನ್ನು ಉತ್ತಮ ಗುಣಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಉತ್ತಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವುದು ನನ್ನ ಹಾಗೂ ಸರಕಾರದ ಉದ್ದೇಶ ಎಂದು ತಿಳಿಸಲಾಯಿತು. ಶೀಘ್ರದಲ್ಲೇ ಈ ಕಾಮಗಾರಿಗಳು ಪ್ರಾರಂಭವಾಗಲಿದ್ದು, ರಸ್ತೆ ನಿರ್ಮಾಣ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಿ ಉತ್ತಮ ರಸ್ತೆ ನಿರ್ಮಿಸುವಂತಹ ಆಗಬೇಕು ಎಂದು ಕರೆ ನೀಡಿದೆ.