Virajpet Minority Leaders Seek Community Development Measures from U.T. Khader, 30/09/2026

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಸಮುದಾಯದ ಮುಖಂಡರುಗಳು, ಇಂದು ನನ್ನ ನೇತೃತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಯು.ಟಿ ಖಾದರ್ ಅವರನ್ನು ಭೇಟಿಯಾಗಿ ತಮ್ಮ ಹಲವು ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.
ಮನವಿಯನ್ನು ಪುರಸ್ಕರಿಸಿದ ಮಾನ್ಯ ಸಚಿವರು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಸಮುದಾಯದ ಅಗತ್ಯಕ್ಕೆ ಅನುಸಾರವಾಗಿ ಮನವಿಯನ್ನು ಪರಿಗಣಿಸುವುದರೊಂದಿಗೆ, ಅಲ್ಪಸಂಖ್ಯಾತ ಇಲಾಖೆಯಲ್ಲಿನ ಸಿಬ್ಬಂದಿಯ ಕೊರತೆಯ ಬಗ್ಗೆಯೂ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
 

Land Pooja Held for Bridge and 60,000-Litre Water Tank in Buffalo Village, 29/09/2026

ಮಡಿಕೇರಿ ತಾಲೂಕು ವ್ಯಾಪ್ತಿಯ ಎಮ್ಮೆಮಾಡು ಗ್ರಾಮದಲ್ಲಿ, ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭ, ಇದೆ ಭಾಗದಲ್ಲಿ ಸುಮಾರು 60 ಸಾವಿರ ಲೀಟರ್ ನೀರು ಶೇಖರಣೆಯ ಟ್ಯಾಂಕ್ ಸಹ ನಿರ್ಮಿಸಲು ವ್ಯವಸ್ಥೆ ಕಲ್ಪಿಸಲಾಯಿತು.

 


Land Pooja and Inauguration of Development Works in Ballamavati, 29/09/2026

ಮಡಿಕೇರಿ ತಾಲೂಕು ಬಲ್ಲಮಾವಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ, ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿದ ಸಂದರ್ಭ.


Water Supply Arrangements Made for Ammakolli Girijan Song, 29/09/2026

ಇತ್ತೀಚೆಗೆ ಪೊನ್ನಂಪೇಟೆ ತಾಲೂಕು ಶ್ರೀಮಂಗಲ ಹೋಬಳಿಗೆ ತೆರಳಿದ ಸಂದರ್ಭ ಅಲ್ಲಿಯ ಕುರ್ಚಿ ಗ್ರಾಮದ ಅಮ್ಮೆಕೊಲ್ಲಿ ಗಿರಿಜನ ಹಾಡಿಗೆ ಭೇಟಿ ನೀಡಿದ್ದೆ.
ಆ ಸಂದರ್ಭದಲ್ಲಿ ಅಲ್ಲಿಯ ಹಾಡಿ ನಿವಾಸಿಗಳು ಮನವಿ ಮಾಡಿದಂತೆ, ಇಂದು ಅವರುಗಳ ಹಾಡಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
 

A.S. Ponnanna Interacts with Residents of Ammakolli Girijana Song and Poochakal Colony, 29/09/2026

ಪೊನ್ನಂಪೇಟೆ ತಾಲೂಕು ಶ್ರೀಮಂಗಲ ಹೋಬಳಿಯ ಅಮ್ಮೆಕೊಲ್ಲಿ ಗಿರಿಜನ ಹಾಡಿ ಹಾಗೂ ಪೂಚಕಲ್ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಹಲವು ಸಮಯ ಮಾತನಾಡಿಸಿದೆ. ಈ ಸಂದರ್ಭದಲ್ಲಿ ಅಲ್ಲಿಯ ನಿವಾಸಿಗಳು ಆತ್ಮೀಯವಾಗಿ ಮಾತನಾಡಿಸುತ್ತಾ, ತಮ್ಮ ಹಾಡಿ ಹಾಗೂ ಕಾಲೋನಿಗಳಲ್ಲಿ ಮುಂದೆ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ನನಗೆ ಮಾಹಿತಿ ನೀಡಿದರು.